ಧೂಮಕೇತು ಮೇಲೆ ಇಳಿಯುವ ಮೊದಲು 3 ಬಾರಿ ಜಿಗಿದಿತ್ತು ಫಿಲೆ

ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲೇ...
ಧೂಮಕೇತು ಮೇಲೆ ಇಳಿಯುವ ಮೊದಲು 3 ಬಾರಿ ಜಿಗಿದಿತ್ತು ಫಿಲೆ

ಲಂಡನ್: ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಧೂಮಕೇತುವೊಂದರ ಮೇಲೆ ಲ್ಯಾಂಡರ್ ವೊಂದನ್ನು ಇಳಿಸುವಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆ (ಇಎಸ್ಎ) ಬುಧವಾರ ಯಶಸ್ವಿಯಾಗಿದೆ. ಆದರೆ, ಆ ಲ್ಯಾಂಡರ್ ಸರಿಯಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆಯೇ ಎನ್ನುವುದು ಇನ್ನೂ ಖಚಿತಪಟ್ಟಿಲ್ಲ.

ಕುರ್ಯುಮೋವ್-ಗೆರಾಸಿಮೆಂಕೋ-67ಪಿ ಹೆಸರಿನ ಧೂಮಕೇತು ಮೇಲೆ ಇಳಿಯುವಾಗ ಫಿಲೆ ಲ್ಯಾಂಡರ್ ಮೂರು ಬಾರಿ ಜಿಗಿದೆದೆ. ಫಿಲೆಯ ಕಾಂತಕ್ಷೇತ್ರ ವಿಶ್ಲೇಷಣೆಯಿಂದ ಈ ವಿಚಾರ ಗೊತ್ತಾಗಿದೆ. ಇಳಿಯುವ ಪ್ರಯತ್ನದಲ್ಲಿ ಮೊದಲು ದೊಡ್ಡ ನೆಗೆತ, ಆ ನಂತರ ಎರಡನೇ ಮತ್ತು ಮೂರನೇ ಬಾರಿಗೆ ಸಣ್ಣದಾಗಿ ಜಿಗಿದು ಒಂದು ಸ್ಥಳದಲ್ಲಿ ನೆಲೆ ನಿಂತಿದೆ.

ಧೂಮಕೇತುವಿನ ದುರ್ಬಲ ಗುರುತ್ವಾಕರ್ಷಣಾ ಶಕ್ತಿ ಮತ್ತು ಲ್ಯಾಂಡರ್ ಅನ್ನು ನೆಲದ ಮೇಲ್ಮೈನಲ್ಲೇ ಹಿಡಿದಿಡಬೇಕಿದ್ದ ಟ್ರಸ್ಟರ್ಸ್ ಮತ್ತು ಹಾರ್ಪೂನ್ಗಳ ವೈಫಲ್ಯದಿಂದಾಗಿಯೇ ಈ ಜಿಗಿತ ಸಂಭವಿಸಿದೆ. ಸದ್ಯಕ್ಕೆ ಫಿಲೆ ರೊಸೆಟ್ಟಾ ಉಪಗ್ರಹದಿಂದ ಸಂಪರ್ಕ್ ಕಡಿದುಕೊಂಡಿದೆ. ಹೀಗಾಗಿ ಧೂಮಕೇತುವಿನ ಮೇಲೆ ಇಳಿದ ಬಳಿಕದ ಬೆಳವಣೆಗೆ ಕುರಿತು ಸರಿಯಾದ ಮಾಹಿತಿ ಇನ್ನೂ ಇಎಸ್ಎಗೆ ಸಿಕ್ಕಿಲ್ಲ.

ಸದ್ಯ ಫಿಲೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದ್ದರೂ ಧೂಮಕೇತುವಿನ ಮೇಲ್ಮೈ ಅನ್ನು ಕೊರೆಯಲು ಅದು ಶಕ್ತವಾಗಿದೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com